ಮೊನ್ನೆಯ ನ್ಯೂಸ್ ಐಟಂ ಒಂದನ್ನು ನೋಡಿ, ನನ್ನಲ್ಲೂ ಸ್ವಲ್ಪ ತಳಮಳ ಉಂಟಾಗಿದೆ. ಬಹುಷಃ ನೀವೆಲ್ಲರೂ ಈ ನ್ಯೂಸ್ ಐಟಂ ನೋಡಿಯೇ ಇರುತ್ತೀರಾ. ಲೋಕಸಭೆ ಚುನಾವಣೆ ಫಲಿತಾಂಶ ಬಂದಂದಿನಿಂದ ನಮ್ಮ ಪ್ರಸಿದ್ಧ ಮಾನ್ಯ ಲಾಲೂಜಿರವರಿಗೆ ಊಟ ಸೇರುತ್ತಿಲ್ಲವಂತೆ, ನಿದ್ರೆ ಬರುತ್ತಿಲ್ಲವಂತೆ. ಅವರ ಅರೋಗ್ಯ ನೋಡಿಕೊಳ್ಳುತ್ತಿರುವ ವೈದ್ಯರು ಅವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರಂತೆ. ಹೀಗೇ ಮುಂದುವರೆದರೆ ಅವರಿಗೆ ಕೊಡುತ್ತಿರುವ ಔಷಧಗಳಾವುವೂ ಪರಿಣಾಮಕಾರಿಯಾಗದೆ ಪರಿಸ್ಥಿತಿ ಬಿಗಡಾಯಿಸಬಹುದೆಂದು. ಪಾಪ ಅವರ ಪಕ್ಷದ ಉಮೇದುವಾರರಾರೂ ಚುನಾವಣೆಯಲ್ಲಿ ಗೆಲ್ಲದೇ ಅವರಿಗೆ ಎಷ್ಟು ನೋವುಂಟು ಮಾಡಿದ್ದಾರೆಂದು ಆ ವೈದ್ಯರಿಗೆ ಹೇಗೆ ತಾನೇ ಅರ್ಥವಾಗುತ್ತೆ? ಅವರೇನು ಈ ಚುನಾವಣೆಗಳ ಗೊಡವೆಗೆ ಹೋಗಿದ್ದರೆ?
ಸರಿ, ಇದಕ್ಕೂ ನನ್ನ ತಳಮಳಕ್ಕೂ ಏನಪ್ಪಾ ಸಂಬಂಧ? ಗೋಕುಲಾಷ್ಟಮಿಗೂ ಇಮಾಂ ಸಾಬರಿಗೂ...? ಎಂದು ನೀವೆಲ್ಲಾ ನನ್ನ ಮೇಲೆ ಮುಗಿಬೀಳುವಿರೆಂದು ನನಗೆ ಗೊತ್ತು. ಸ್ವಲ್ಪ ಸಮಾಧಾನವಿರಲಿ.
ಚುನಾವಣೆ ಫಲಿತಾಂಶ ಬಂದ ದಿನದಿಂದ ಖಂಡಿತವಾಗಿ ನೀವೆಲ್ಲರೂ ಒಂದು ಅತಿ ಮುಖ್ಯ ಬದಲಾವಣೆ ಗಮನಿಸಿರುತ್ತೀರ. ಆದರೆ ನನ್ನ ಹಾಗೆ ತಳಮಳವಾಗದಿರಬಹುದು. ಸುಮಾರು ಐದು ವರ್ಷಗಳಿಂದ ತಪ್ಪದೇ ರಾಹುಲ್ ಜಿ, ದೀದಿ ಜಿ, ದಿಗ್ಗಿ ಜಿ, ಬಹನ್ ಜಿ, ಗೌಡಾ ಜಿ, ನಾಯ್ಡು ಜಿ, ಲಾಲೂ ಜಿ, ಸಿದ್ದೂ ಜಿ, ಕುಮಾರಣ್ಣ ಮುಂತಾದ ಅನೇಕ 'ಜೀ' ಗಳು ಪ್ರಧಾನಮಂತ್ರಿ ಮೋದಿಯವರನ್ನು ಒಂದು ಕ್ಷಣವೂ ಬಿಡದೇ ಧ್ಯಾನಿಸುತ್ತಿದ್ದರು. ಎಷ್ಟು ಬಗೆಯ ಬಿರುದು-ಬಾವಲಿಗಳನ್ನು ಅವರಿಗೆ ಕೊಟ್ಟಿದ್ದರು. ಇದ್ದಕ್ಕಿದ್ದಹಾಗೆ ಇವೆಲ್ಲ ತಣ್ಣಗಾದರೆ ತಳಮಳವಲ್ಲದೆ ಏನಾಗಬೇಕು? ಬೈಗುಳ ಕೇಳಿ-ಕೇಳಿ ಅದೇ ಒಂದು ರೀತಿ ಜೋಗುಳದ ಹಾಗೆ ಅಭ್ಯಾಸವಾಗಿತ್ತು. ದೇವತೆಗಳಿಗೆ ಬೆಳದಿಂಗಳು ಅಮೃತದ ಹಾಗಂತೆ. ನನಗೂ (ಬಹುಷಃ ಮೋದಿ ಜಿ ರವರಿಗೂ) ಈ ಬೈಗುಳ, ಆಪಾದನೆ ಎಷ್ಟು ಅಭ್ಯಾಸವಾಗಿದೆಯೆಂದರೆ ಅವಿಲ್ಲದೆ ಊಟ ಸೇರುವುದಿಲ್ಲ, ನಿದ್ರೆ ಬರುವುದಿಲ್ಲ. ಯಾವ ಕೆಲಸದಲ್ಲೂ ಮನಸು ನಿಲ್ಲುತ್ತಿಲ್ಲ. ಯಾರೊಡನೆಯೂ ಮಾತು-ಕಥೆ ಬೇಕಿಲ್ಲ. ಒಂದು ರೀತಿಯ ವೈರಾಗ್ಯ ಭಾವ. ಇಂಥಾ ಬೈಗುಳಗಳಿಲ್ಲದೇ ಮುಂದೆ ಹೇಗಪ್ಪಾ ಬದುಕು ಸಾಗಿಸುವುದು ಎನಿಸಿಬಿಟ್ಟಿದೆ!!
ಇವರೆಲ್ಲರ ಈ ಬೈಗುಳಗಳನ್ನು ನಮಗೆಲ್ಲಾ ತಲುಪಿಸಲು ' ಪ್ರೆಸ್ಸ್ಟಿಟ್ಯೂಟ್ಸ್ ' ಗಳ ಪಾತ್ರ ಅತಿ ಮಹತ್ವವಾದುದು. ಅವರಿಲ್ಲದಿದ್ದರೆ ನಮ್ಮ ಬದುಕು ಶೂನ್ಯ, ಬರಡಾಗುತ್ತಿತ್ತು. ಪಾಪ ಬಹಳ ಮುತುವರ್ಜಿ ವಹಿಸಿ ಅತಿ ಸಾಮಾನ್ಯ ಪುಡಾರಿಯಿಂದ ಅತಿ ದೊಡ್ಡ ನೇತಾರರ ಬೈಗುಳಗಳನ್ನು ಅದೆಷ್ಟೇ ಕಷ್ಟವಾದರೂ ನಮಗೆ ಮುಟ್ಟಿಸಿ ನಮ್ಮನ್ನು ಕೃತಾರ್ಥರನ್ನಾಗಿಸಿದ್ದಾರೆ. ನಾವೆಲ್ಲರೂ ಅವರಿಗೆ ಚಿರಋಣಿಯಾಗಿರಬೇಕಾದ್ದು ನಮ್ಮೆಲ್ಲರ ಕರ್ತವ್ಯ.
ಬರೇ ಬೈಗುಳ ಕೇಳುವುದಲ್ಲದೇ, ಅವರ ಮುಖಭಾವ ನೋಡಿ ಅದನ್ನು ಅನುಭವಿಸಿದ ಸುಖವನ್ನು ಹೇಗೆ ವರ್ಣಿಸಲಿ?
೬ನೇ ಹಂತದ ಚುನಾವಣಾ ಪ್ರಚಾರ ಸಭೆಯಲ್ಲಿ ದೀದಿ ಜಿ ಸಭಿಕರನ್ನು ತಂದೆ-ತಾಯಿಯರೇ, ಅಕ್ಕ-ತಂಗಿಯರೇ, ಅಣ್ಣ-ತಮ್ಮಂದಿರೇ, ನೀವೆಲ್ಲರೂ ಮೋದಿಯವರನ್ನು ದೇಶ ಬಿಟ್ಟೇ ಓಡಿಸಿ ಎಂದು ಕೊಟ್ಟ ಕರೆ, ಅವರ ಮುಖ ಭಾವ, ಆಂಗಿಕ ಪ್ರದರ್ಶನ ಯಾರಾದರೂ ಮರೆಯಲುಂಟೇ? ಅವರ ಭಾಷಣ ಕೇಳಿದ ಯಾರಿಗಾದರೂ ಅವರು ಸೋಲಿನ ಹಾದಿಯಲ್ಲಿದ್ದು ಡೆಸ್ಪರೇಟ್ ಆಗಿದ್ದರೆನಿಸಿದ್ದರಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ನಮ್ಮ ರೇವಣ್ಣ, ಕುಮಾರಣ್ಣ, ಸಿದ್ದೂಜಿ, ಗೌಡಾಜಿ ಅಲ್ಲದೆ ಸಣ್ಣ-ಪುಟ್ಟ ಮಾಂಡಲೀಕರೂ ಕೂಡ ಮೋದಿಯವರನ್ನು ಹೀಯಾಳಿಸಿ, ಏಕವಚನದಲ್ಲಿ ಸಂಬೋಧಿಸಿದ್ದನ್ನು ಯಾರು ತಾನೇ ನಿರಂತರ ನೆನಪಿನಿಂದ ಅಳಿಸಿಹಾಕಲು ಸಾಧ್ಯ? ನಾನು ಯಾವ ಪಕ್ಷಕ್ಕೂ ಸೇರಿಲ್ಲ. ನಮ್ಮ ಪ್ರಧಾನಿಯವರನ್ನು ವಿನಾಕಾರಣ ನಿಂದಿಸಿದ್ದಕ್ಕೆ ನನ್ನ ತಕರಾರು. ಅವರ ಬಗ್ಗೆ ಏನಾದರೂ ಅಭಿಪ್ರಾಯ ಭೇದವಿದ್ದರೆ ಸಹ್ಯ ಮಾತುಗಳಲ್ಲೇ ತರ್ಕಬದ್ಧವಾಗಿ ಮಂಡಿಸಿ ಪ್ರಚುರಪಡಿಸಬಹುದಿತ್ತು. ಅದನ್ನು ಎಲ್ಲರೂ ಒಪ್ಪುತ್ತಿದ್ದರೇನೋ! ಹೀನ ಶಬ್ದಗಳಲ್ಲಿ ನಿಂದನೆ ಯಾರಿಗೂ ಶೋಭೆ ತರುವುದಿಲ್ಲ. ಒಟ್ಟಿನಲ್ಲಿ ಈ ನಿಂದನಾಪರ್ವ ಸತತ ೫ ವರ್ಷ ಮುಂದುವರೆದು ಈಗ ಸ್ತಬ್ದವಾಗುವ ಹಂತ ತಲಪಿರಬಹುದು.
ಇಂದಿನಿಂದ ಹೊಸ ಪರ್ವ ಪ್ರಾರಂಭ. ನಿರೀಕ್ಷೆ ಬಹಳ ಇದೆ. ನೋಡೋಣ ಹೇಗಾಗುತ್ತೆ ಅಂತ. ಅದನ್ನೆದುರಿಸಲು ನಾವೆಲ್ಲರೂ ತಯಾರಾಗೋಣ.

No comments:
Post a Comment